ವಾಸವಿ ಅನ್ನದಾನ ಸೇವಾಟ್ರಸ್ಟ್ ಪ್ರಾರಂಭವಾದದ್ದು 2016ರಲ್ಲಿ ಈ ನಮ್ಮ ಟ್ರಸ್ಟೀಗಳಲ್ಲಿ ಕೈ ಕೈಗಾರಿಕೋದ್ಯಮಿಗಳು ವೈದ್ಯರುಗಳು ಇಂಜಿನಿಯರ್ಗಳು ಹಾಗೂ ಅನೇಕ ನಿವೃತ ಸರ್ಕಾರಿ ಅಧಿಕಾರಿಗಳಿರುತ್ತಾರೆ ನಮ್ಮ ಟ್ರಸ್ಟಿನ ಧ್ಯೇಯ ಸಾರ್ವಜನಿಕವಾಗಿ ತೊಡಗಿಸಿಕೊಳ್ಳುವುದು ಅಧ್ಯಕ್ಷರಾದ ಶ್ರೀಪತಿ ಸೀತಾರಾಮಯ್ಯ ಸೆಕ್ರೆಟರಿ ಬಿ ರಾಮಸ್ವಾಮಿ ಮತ್ತು ಉಪಾಧ್ಯಕ್ಷರು ಯುವರಾಜ್ ರವರು ತುಂಬಾ ಕ್ರಿಯಾಶೀಲರು ಹಾಗೂ ಉತ್ತಮ ಅನುಭವ ಪಡೆದಿರುತ್ತಾರೆ ಪ್ರಸ್ತುತ ಸರ್ಕಾರಿ ಆಸ್ಪತ್ರೆಗಳ ಒಳ ರೋಗಿಗಳಿಗೆ ಸರ್ಕಾರವೇ ಆಹಾರವನ್ನು ಒದಗಿಸುತ್ತದೆ ಆದರೆ ಅವರನ್ನು ನೋಡಿಕೊಳ್ಳುವ ಸಂಬಂಧಿಕರಿಗೆ ಆ ವ್ಯವಸ್ಥೆ ಇರುವುದಿಲ್ಲ ಅತ್ಯಂತ ಬಡತನದಿಂದ ಬೇರೆ ಬೇರೆ ಊರುಗಳಿಂದ ಬರುವವರನ್ನು ಗಮನವಿಟ್ಟುಕೊಂಡು ಅನ್ನದಾನ ಸೇವೆಯನ್ನು ಪ್ರಾರಂಭಿಸಿರುತ್ತೇವೆ ಜಾತಿ ಮತ ಭೇದವಿಲ್ಲದೆ ರೋಗಿಗಳ ಸಂಬಂಧಿಕರಿಗೆ ಉಚಿತ ಊಟ ನೀಡುವಲ್ಲಿ ನಮ್ಮ ಪಾತ್ರ ಹಿರಿದು ಈಗ ವಿಕ್ಟೋರಿಯಾ ವಾಣಿವಿಲಾಸ್ ಹಾಗೂ ಮಿಂಟೋ ನಿಮಾನ್ಸ್ ಮತ್ತು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳನ್ನು ನೋಡಿಕೊಳ್ಳುವವರಿಗೆ ಉಚಿತವಾಗಿ ಪ್ರತಿದಿನ 150 ರಿಂದ 200 ಜನರಿಗೆ ಆಹಾರ ಒದಗಿಸುತ್ತಿದ್ದೆವು ಆದರೆ ಪ್ರಸ್ತುತ ಸುಮಾರು 450 ಜನರಿಗೆ ಊಟವನ್ನು ನೀಡುತ್ತಿದ್ದೇವೆ ಜನರಿಗೆ ಉಚಿತ ಊಟ ನೀಡುವುದು ಈ ಮಹತ್ಕಾರ್ಯಕ್ಕೆ ತಮ್ಮಂತಹ ಸಹೃದಯಿಗಳ ಸಹಾಯ ಮತ್ತು ಸಹಕಾರ ಬೇಡುತ್ತೇವೆ ಇದುವರೆಗೂ ಸುಮಾರು 12 ಲಕ್ಷಕ್ಕಿಂತ ಜಾಸ್ತಿ ಒಳರೋಗಿಗಳ ಸಂಬಂಧಿಕರಿಗೆ ಉಚಿತ ಊಟವನ್ನು ಒದಗಿರಿಸುತ್ತೇವೆ ಇಂತಹ ಕಾಯಕ ತಮ್ಮಂತಹ ಧಾನಿಗಳಿಂದ ನೆರವೇರಿದೆ