ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಡಯಾಲಿಸಿಸ್ ಚಿಕಿತ್ಸೆಗಾಗಿ ಪ್ರತಿ ತಿಂಗಳು ದನ ಸಹಾಯ ಮಾಡುತ್ತಿದ್ದೇವೆ
ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಪ್ರತಿ ವರ್ಷ ನೋಟ್ ಪುಸ್ತಕ ಸಮವಸ್ತ್ರ ಲೇಖನ ಸಾಮಗ್ರಿಗಳು ಮತ್ತು ಶಾಲೆಗಳಿಗೆ ನಲಿ-ಕಲಿ ಟೇಬಲ್ ಸಹ ನೀಡಿರುತ್ತೇವೆ
ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳಿಗೆ ಉಚಿತವಾಗಿ ಮಜ್ಜಿಗೆಯನ್ನು ನೀಡುತ್ತಿದ್ದೇವೆ.
ಲಾಕ್ಡೌನ್ ಸಮಯದಲ್ಲಿ ನಮ್ಮ ಸೇವೆಗಳು ಮಾರ್ಚ್ 2020 ಜೂಲೈ 2020 ಕರಾಳ ಕೊರೋನ ಜನರ ಬದುಕನ್ನೇ ದಿಕ್ಕು ತಪ್ಪಿಸಿದ ಕೊರೋನಾ ಮಹಾಮಾರಿ ಜನಸಾಮಾನ್ಯರ ಬದುಕು ತಲ್ಲಣ ಗೊಳಿಸಿತು ಈ ಸಂದರ್ಭದಲ್ಲಿ ನಾವು ನಮ್ಮ ಸೇವೆ ಮುಂದುವರಿಸಿದೆವು
ಸುಮಾರು 60 ಸಾವಿರ ಊಟ ಮತ್ತು ನೀರಿನ ಪ್ಯಾಕೆಟ್ ಗಳನ್ನು ಜನಸಾಮಾನ್ಯರಿಗೆ ವಿತರಿಸಿದೆವು
ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರಿಗೆ ಮತ್ತು ಅರೆಕಾಲಿಕ ವೈದ್ಯರಿಗೆ ಪೊಲೀಸ್ರವರಿಗೆ ಪುರಸಭೆ ಸಿಬ್ಬಂದಿಗಳಿಗೆ ಬೆಳಗಿನ ತಿಂಡಿ ಮತ್ತು ಊಟ ವಿತರಿಸಿದ್ದೇವೆ.
ಶ್ರವಿಕ್ ರೈಲಿನಲ್ಲಿ ಪ್ರಯಾಣಿಸಿದ ಸುಮಾರು 5000 ಪ್ರಯಾಣಿಕರಿಗೆ ಉಪಹಾರ ಮತ್ತು ಊಟ ಬನ್ ಜಂಪಾಕೇಟ್ ಹಾಗೂ ಪಾರ್ಲೆ-ಜಿ ಬಿಸ್ಕೆಟ್ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುತ್ತೇವೆ.
4.ಕೆ ಎಸ್ ಆರ್ ಟಿ ಸಿ ಮೆಜೆಸ್ಟಿಕ್ ಬಸ್ ಸ್ಟ್ಯಾಂಡಿನಲ್ಲಿ ಸುಮಾರು 5 ಸಾವಿರ ವಲಸಿಗರಿಗೆ ಊಟ ಮತ್ತು ನೀರಿನ ಪ್ಯಾಕೆಟ್ ಒದಗಿಸಿದ್ದೇವೆ.
ಗುಡಿಸಲಿನಲ್ಲಿ ವಾಸವಿರುವವರಿಗೆ ಮನೆ ಮೇಲೆ ಮುಚ್ಚಲು ಟಾರ್ಪಲ್ ಇನ್ ಗಳನ್ನು ನೀಡಿರುತ್ತೇವೆ ಅವಶ್ಯಕತೆ ಇದ್ದವರಿಗೆ ಆಹಾರ ಪದಾರ್ಥಗಳು ತರಕಾರಿ ಮತ್ತು ಮಾಸ್ ಸ್ಯಾನಿಟೈಜರ್ ಹಾಗೂ ಕಷಾಯದ ಪುಡಿ ರಸ್ತೆ ಬದಿ ವ್ಯಾಪಾರಿಗಳಿಗೂ ವಿತರಿಸಿದ್ದೇವೆ ಚಿಂತಾಮಣಿ ಶಾಖೆಯಲ್ಲೂ ಸಹ ಈ ಎಲ್ಲ ಸೇವೆ ನಡೆಸಿಕೊಂಡು ಬರುತ್ತಿದ್ದೇವೆ
ನಮ್ಮ ಮುಂದಿನ ಯೋಜನೆಗಳು
ಬೆಂಗಳೂರು ಮತ್ತು ಇತರ ಊರುಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಅನುದಾನ ಮಾಡುವುದು
ಸರ್ಕಾರಿ ಆಸ್ಪತ್ರೆಗಳ ಔಷಧಾಲಯದಲ್ಲಿ ಲಭ್ಯವಿಲ್ಲದ ಔಷಧಗಳನ್ನು ಬೇರೆ ಕಡೆಯಿಂದ ತರಿಸಿಕೊಂಡು ಬಡ ರೋಗಿಗಳಿಗೆ ಉಚಿತವಾಗಿ ನೀಡುವುದು
ವೃದ್ರಾಶ್ರಮವನ್ನು ನಿರ್ಮಿಸುವುದು
ಅರ್ಹತೆಯುಳ್ಳ ಬಡ ವಿದ್ಯಾರ್ಥಿಗಳಿಗೆ ವಿದ್ಯೆ ವಿದ್ಯಾರ್ಥಿ ವೇತನ ನೀಡುವುದು
ಸಾಮೂಹಿಕ ವಿವಾಹ ಹಮ್ಮಿಕೊಳ್ಳುವುದು
ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯ ಮತ್ತು ಪ್ರಯಾಗ ಉತ್ತರ ಪ್ರದೇಶ ಹಾಗೂ ಪಂಡರಾಪುರ ಮಹಾರಾಷ್ಟ್ರ ಬರುವ ಯಾತ್ರಿಕರಿಗೆ ಅನ್ನದಾನ ಹಾಗೂ ತಂಗಳು ವಸತಿ ಸೌಕರ್ಯವನ್ನು ಒದಗಿಸುವುದು. ಮಹತ್ತರವಾದ ಈ ಒಂದು ಪುಣ್ಯ ಕಾರ್ಯಕ್ಕೆ ಉದಾರವಾಗಿ ಸಹಾಯ ಮಾಡಿರಿ ನಮ್ಮ ಜೊತೆಗೂಡಿ ನಮ್ಮ ಟ್ರಸ್ಟ್ ನ ಸಾಮಾಜಿಕ ಚಟುವಟಿಕೆಯಲ್ಲಿ ನಮ್ಮೊಂದಿಗೆ ಭಾಗವಹಿಸಿ ನಿಮಗೆ ನಮ್ಮ ಪ್ರೀತಿಯ ಆಹ್ವಾನ